ಕುತುಬ್ ಮಿನಾರ್ ಸಂಕೀರ್ಣವು ಭಾರತದ ದೆಹಲಿಯಲ್ಲಿರುವ ಸ್ಮಾರಕ ಮತ್ತು ಕಟ್ಟಡಗಳ ಸಮೂಹವಾಗಿದೆ. ಈ ಸಂಕೀರ್ಣದ ಅತಿ ಪ್ರಸಿದ್ಧ ಅಂಗವೆಂದರೆ ಕುತುಬ್ ಮಿನಾರ್ ಗೋಪುರ. ಇದರ ನಿರ್ಮಾಣ ಕಾರ್ಯವನ್ನು ಗುಲಾಮ ಸಂತತಿಯ ಮೊದಲ ಸುಲ್ತಾನ ಕುತ್ಬುದ್ದೀನ್ ಐಬಕ್‌ ಪ್ರಾರಂಭಿಸಿದನು.ಆದರೆ ಗೋಪುರದ ರಚನೆಯನ್ನು ಇಲ್ತಾಮಿಷ್ ಪೂರ್ಣಗೊಳಿಸಿದನು ನಂತರ ಅಲ್ತ್‌ಮಷ್ ಮತ್ತು ಅಲ್ಲಾ ಉದ್ದೀನ್ ಖಿಲ್ಜಿ ಇತ್ಯಾದಿ ಸುಲ್ತಾನರು ಬೆಳೆಸಿಕೊಂಡು ಹೋದರು. ಈ ಸಂಕೀರ್ಣದ ಇತರ ಮುಖ್ಯ ಸ್ಮಾರಕಗಳೆಂದರೆ ಕಬ್ಬಿಣದ ಕಂಬ, ಅಲಾಯ್ ದ್ವಾರ ಮತ್ತು ಖುವ್ವತ್‌-ಅಲ್‌-ಇಸ್ಲಾಮ್ ಮಸೀದಿ. ೧೯೯೩ರಲ್ಲಿ ಯುನೆಸ್ಕೋ ಕುತುಬ್ ಮಿನಾರ್ ಸಂಕೀರ್ಣಕ್ಕೆ ವಿಶ್ವ ಪರಂಪರೆಯ ತಾಣ ಎಂಬ ಮಾನ್ಯತೆ ನೀಡಿತು. == ಇವನ್ನೂ ನೋಡಿ == ದೆಹಲಿ == ಬಾಹ್ಯ ಸಂಪರ್ಕಕೊಂಡಿಗಳು == ಯುನೆಸ್ಕೋ ಅಧಿಕೃತ ತಾಣ ಖುವ್ವತ್‌-ಅಲ್‌-ಇಸ್ಲಾಮ್ ಮಸೀದಿ ಕಬ್ಬಿಣದ ಕಂಬ 2004-01-06 ವೇಬ್ಯಾಕ್ ಮೆಷಿನ್ ನಲ್ಲಿ. ಕುತುಬ್ ಮಿನಾರ್ ಸಂಕೀರ್ಣದ ಛಾಯಾಚಿತ್ರಗಳು